'ದರ್ಬೆ ನಾರಾಯಣಭಟ್ಟ ಶಂಕರ ಭಟ್ಟ'ರು ಕನ್ನಡದ ನುಡಿಯರಿಗರು (ಭಾಷಾತಜ್ಞರು). ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಭಾಷಾಪ್ರತಿಪಾದನೆಯ ಮೂಲಕ ಕನ್ನಡ ಭಾಷಾ ಪ್ರಪಂಚಕ್ಕೆ ಅಚ್ಚಕನ್ನಡದ ಡಿ.ಎನ್.ಶಂಕರ ಭಟ್ಟರೆಂದು ಪ್ರಸಿದ್ಧರಾಗಿದ್ದಾರೆ. == ಜನನ, ವಿದ್ಯಾಭ್ಯಾಸ == ಶಂಕರಭಟ್ಟರು ೧೫, ಜುಲೈ, ೧೯೩೫ ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ, ಪಿ.ಎಚ್.ಡಿ [೧೯೬೨] ಗಳಿಸಿದರು. ೧೯೬೬ ರಲ್ಲಿ ( ) ಬ್ರಿಟಿಷ್ ಕೌನ್ಸಿಲ್ ನಲ್ಲಿ, (), 'ಫೆಲೋಶಿಪ್' ಆಯ್ಕೆಯಾಗಿ, ಇಂಗ್ಲೀಷ್ ನಲ್ಲಿ, 'ಉಪಭಾಷಾಪರಿವೀಕ್ಷಣೆಯ ವಿಧಾನ'ಗಳನ್ನು ಕುರಿತು 'ಅಧ್ಯಯನ' ಮಾಡಿದರು. == ಅಧ್ಯಯನ ಮತ್ತು ವೃತ್ತಿಜೀವನ == === ಮೊದಲನೆಯ ಹಂತ === 'ಪುಣೆ ವಿಶ್ವ ವಿದ್ಯಾಲಯ'ದಿಂದ "ದ್ರಾವಿಡಿಯನ್ ಭಾಷಾಶಾಸ್ತ್ರ" ದ ಅಧ್ಯಯನ. (೧೯೬೨-೬೫) 'ಪುಣೆ ಡೆಕ್ಕನ್ ಕಾಲೇಜ್' ನಲ್ಲಿ "ಟಿಬೆಟೊ ಬರ್ಬನ್ ಭಾಷೆ" ಗಳ ರೀಡರ್ ಆಗಿ, (೧೯೬೫-೭೯) 'ತಿರುವನಂತಪುರ ' ನಲ್ಲಿ, 'ಭಾಷಾ ಪ್ರಾಧ್ಯಾಪಕ,' (೧೯೭೯-೮೫) 'ಮಣಿಪುರದ ರಾಜಧಾನಿ', 'ಇಂಫಾಲ್'-ಮಹಾವಿಶ್ವವಿದ್ಯಾಲಯ 'ಭಾಷಾ ಪ್ರಾಧ್ಯಾಪಕರಾಗಿ.' (೧೯೮೮-೯೫) 'ಮೈಸೂರಿನ, ಸಿ.ಐ.ಎಲ್' ನಲ್ಲಿ () 'ಯು.ಜಿ.ಸಿ' ವತಿಯಿಂದ ನಿಯೋಜಿತ 'ಪ್ರಖ್ಯಾತವಿಜ್ಞಾನಿ' ಯಾಗಿ ಸೇವೆಸಲ್ಲಿಸಿದರು. === ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ === 'ಸ್ಟಾನ್ ಫರ್ಡ್' ವಿಶ್ವ ವಿದ್ಯಾಲಯದಲ್ಲಿ '( )' ಭಾಷಾ ಶಾಸ್ತ್ರಗಳನ್ನು '( ) ಕುರಿತಂತೆ, ಯೋಜನೆಗಳಲ್ಲಿ ಭಾಗವಹಿಸಿದರು. [೧೯೭೩-೭೫] ೧೯೯೭ ರಲ್ಲಿ ಬೆಲ್ಜಿಯಂ ನ, "ಆಂಟ್ ವರ್ಪ್," ನ ವಿಶ್ವವಿದ್ಯಾಲಯ ದಲ್ಲಿ '( ),'ಆಗಿ, ಆಸ್ಟ್ರೇಲಿಯದಲ್ಲಿ, ಮೆಲ್ಬೊರ್ನ್ ನಗರದ ' ' ವಿಶ್ವ ವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕ [೨೦೦೦] ಜರ್ಮನಿ' ಯ, ಲೀಪ್ಝಿಗ್ ನಗರದಲ್ಲಿ, " " ನಲ್ಲಿ, "" ಅತಿಥಿವಿಜ್ಞಾನಿಯಾಗಿ, [೨೦೦೭] === ಪುಣೆಯಲ್ಲಿ === ನಿಯೋಜಿತ ಕನ್ನಡದ ನೇರ ಸಂಬಂಧವಿಲ್ಲ. ಆದರೂ ಕನ್ನಡದಲ್ಲಿ ಅಪಾರಸಾಧನೆ, ಮಾಡಿದ್ದಾರೆ. ವಿಶಿಷ್ಟಸಾಧನೆ, ಬರವಣಿಗೆಯ ವೈಶಾಲ್ಯತೆ, ವ್ಯಾಪ್ತಿ, ಗಹನವಾದ ಇಂಗ್ಲೀಷ್ ನಲ್ಲಿ, ೧೫ ಪುಸ್ತಕಗಳನ್ನು ವಿಶ್ವವಿಖ್ಯಾತ ಪ್ರಕಟನಾಲಯಗಳು ಪ್ರಕಟಿಸಿವೆ. ಇದು ಅವರ ಕನ್ನಡಪರ ಚಟುವಟಿಕೆಯ ಪ್ರಥಮ ಭಾಗ. ಪುಣೆಯ, 'ಡೆಕ್ಕನ್ ಕಾಲೇಜ್' ನಲ್ಲಿ ಪ್ರಕಟವಾದ, ಮಾಹಿತಿ ಸಂಗ್ರಹ. 'ತುಳು', 'ಬೋಡೊ', 'ಥಂಕುರ್', 'ನಾಗಾ'', 'ಹವ್ಯಕ್,' 'ಕೊರಗ ಭಾಷೆ.' === 'ಕನ್ನಡ ಭಾಷಾ ಚರಿತ್ರೆ' === ಸೈದ್ಧಾಂತಿಕ, ಇಂಗ್ಲೀಷ್ ಕೃತಿಗಳು. ಇದರಲ್ಲಿ ಹಲವು ಕೃತಿಗಳು ಕನ್ನಡಕ್ಕೆ ಸಂಬಂಧಿಸಿವೆ. 'ಕನ್ನಡದ ಬಗ್ಗೆ ನೀವೇನು ಬಲ್ಲಿರಿ ? [೧೯೭೦] ಭಾರತೀಯ ಸ್ವರೂಪ. ಮತ್ತು ಬರಹ, ರೊ.ಗು.ಇಂದ್ರಜಾಲ' ಮುಂತಾದ ಬರಹ ಬಗ್ಗೆ ವೈಜ್ಞಾನಿಕ ಸಂಗತಿ. ಸರಳ ಸಂಪತ್ತಿನ ಭಾಷೆ ವಿವರಿಸುತ್ತಾರೆ. ಇವೆಲ್ಲಾ 'ಸುಧಾ ಪತ್ರಿಕೆ,' ಯಲ್ಲಿ ಪ್ರಕಟವಾದವು. === 'ಕನ್ನಡ ಭಾಷೆ', ಮತ್ತು 'ವ್ಯಾಕರಣಗಳ ಇತಿಹಾಸದ ಮರುನಿರ್ಮಾಣ' === 'ಕನ್ನಡ ಭಾಷೆ, ಮತ್ತು ವ್ಯಾಕರಣಗಳ ಇತಿಹಾಸದ ಮರುನಿರ್ಮಾಣ' ಶಂಕರ ಭಟ್ಟರ ತೀವ್ರ ಆಸಕ್ತಿಗಳಲ್ಲಿ ಒಂದು. ೧೯೭೮ ಪ್ರಕಟವಾದ, 'ಕನ್ನಡ ಭಾಷಾ ಚರಿತ್ರೆ' ಮೊದಲ ಪ್ರಯತ್ನ. ಕನ್ನಡಪದ ರಚನೆ. ಶೈಲಿ ನಿಖರವಾಗಿದೆ. ಶಾಸ್ತ್ರರಚನೆಗೆ ಸೂಕ್ತ. ಭಾಷೆಯ ಚಾರಿತ್ರಿಕ ಮುಖ, ಸಮಕಾಲೀನ ಆಸಕ್ತಿಗಳು, ಪರಸ್ಪರ ಪೂರಕ. ಶಂಕರ ಭಟ್ಟರು, ಅಂತರರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞರು. ಗ್ರಹಿಸಿ ಬಗ್ಗೆ ಜಾಣತನ. ಕನ್ನಡ ಭಾಷೆಯ ಸಾಹಿತ್ಯ, ಮತ್ತು ವ್ಯಾಕರಣ, ಛಂದಸ್ಸು, ಅಧ್ಯಯನ, ಇತಿಹಾಸದ ಮರುನಿರ್ಮಾಣ ಅವರ ಆಸಕ್ತಿಗಳಲ್ಲೊಂದು. ೧೯೭೮-'ಕನ್ನಡ ಭಾಷೆಯ ಚರಿತ್ರೆ' ಮೊದಲ ಹೆಜ್ಜೆ. ಇತ್ತೀಚೆಗೆ ರಚಿಸಿದ, ಪ್ರೌಢಪ್ರಯತ್ನ. ಇಲ್ಲಿ ಗಮನಿಸಬೇಕಾದದ್ದು ಸಂಸ್ಕೃತವನ್ನು ಅವಲಂಭಿಸದೇ, ದ್ರಾವಿಡಭಾಷೆಯ ವರ್ಗಕ್ಕೆ ಸಹಜವಾದ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ. ಕನ್ನಡವಾಕ್ಯಗಳು [೧೯೭೮], ಕನ್ನಡ ಶಬ್ದರಚನೆ, [೧೯೯೯] [ಕನ್ನಡ ಸರ್ವನಾಮಗಳು], ಅನನ್ಯಕೃತಿಗಳೆಂದು ಗುರುತಿಸಲಾಗಿವೆ. ಅವರ ಇನ್ನೊಂದು ಅತ್ಯಂತ, ಮುಖ್ಯಕೃತಿ, 'ಕನ್ನಡಕ್ಕೆ ಬೇಕು, ಕನ್ನಡದ್ದೇ ವ್ಯಾಕರಣ' ಅವರ ಸಂಶೋಧನೆಗಳ ತಾತ್ವಿಕ ನೆಲೆಗಳು, ಅತ್ಯಂತ ಮುಖ್ಯ. ಇಲ್ಲಿ ಎರಡು ಮುಖ್ಯ ಆರ್ಯಮೂಲದ ಸಂಸ್ಕೃತ, ಇನ್ನೊಂದೆಡೆ ಪಾಶ್ಚಾತ್ಯಮೂಲದ ಇಂಗ್ಲೀಷ್-ಕನ್ನಡ ಭಾಷೆಯ ಸ್ವರೂಪ, ಹಾಗೂ ಇತಿಹಾಸಗಳಲ್ಲಿ, ಇಂತಹ ಅನನ್ಯತೆಯ ಅನ್ವೇಷಣೆಯನ್ನು ನಿರಂತರವಾಗಿ ಮಾಡುತ್ತಾಬಂದಿದ್ದಾರೆ. ಅವರ ತಾತ್ವಿಕ ನಿಲವುಗಳ ಫಲವಾಗಿ ಇವು ಹೊರಹೊಮ್ಮಿವೆ. == ಕೃತಿಗಳು == ೨೮ಕ್ಕೂ ಹೆಚ್ಚಿನ ಪುಸ್ತಕಗಳನ್ನು, ಹಾಗೂ ೧೫೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಚಿಸಿದ್ದಾರೆ. ಕೆಳಗಿನದು ಕೃತಿಗಳ ಅಪೂರ್ಣ ಪಟ್ಟಿ. ' ', ',' ' ' '' ' ' ' ' ' ' ' ' ' ' ' ,' ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು, ಬಾಶಾ ಪ್ರಕಾಶನ, ಹೆಗ್ಗೋಡು, ೨೦೦೯ ಮಾತಿನ ಒಳಗುಟ್ಟು, ಬಾಶಾ ಪ್ರಕಾಶನ, ಹೆಗ್ಗೋಡು, ೨೦೦೯ ಕನ್ನಡ ನುಡಿ ನಡೆದು ಬಂದ ದಾರಿ, ಬಾಶಾ ಪ್ರಕಾಶನ, ಹೆಗ್ಗೋಡು, ೨೦೦೭ ಕನ್ನಡ ಬರಹವನ್ನು ಸರಿಪಡಿಸೋಣ, ಬಾಶಾ ಪ್ರಕಾಶನ, ಮಯ್ಸೂರು, ೨೦೦೫ ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?, ಬಾಶಾ ಪ್ರಕಾಶನ, ಮಯ್ಸೂರು, ೨೦೦೫ : , , , ೨೦೦೪ ಕನ್ನಡ ವಾಕ್ಯಗಳ ಒಳರಚನೆ, ಬಾಶಾ ಪ್ರಕಾಶನ, ಮಯ್ಸೂರು, ೨೦೦೪ ಕನ್ನಡ ಸರ್‍ವನಾಮಗಳು, ಬಾಶಾ ಪ್ರಕಾಶನ, ಮಯ್ಸೂರು, ೨೦೦೩ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ಬಾಶಾ ಪ್ರಕಾಶನ, ಮಯ್ಸೂರು, ೨೦೦೦ , , , ೨೦೦೦ , : , , , ೧೯೯೯. ಕನ್ನಡ ಶಬ್ದರಚನೆ, ಕ್ರಯ್ಸ್ತ ಕಾಲೇಜು, ಕನ್ನಡ ಸಂಗ, ಬೆಂಗಳೂರು, ೧೯೯೯. ತಿದ್ದಿದ ಮುಂದಿನ ಒಬ್ಬೆ: ಕನ್ನಡ ಪದಗಳ ಒಳರಚನೆ, ಬಾಶಾ ಪ್ರಕಾಶನ, ಮಯ್ಸೂರು, ೨೦೦೨. ( .. ), , , ೧೯೯೭ , , , ೧೯೯೪ , , , ೧೯೯೧. , ೧೯೯೨. , ’ , . ೧೯೮೬ , , , ೧೯೮೧ , , , ೧೯೭೯ ಕನ್ನಡ ವಾಕ್ಯಗಳು, ಗೀತಾ ಬುಕ್ ಹವ್ಸ್, ಮಯ್ಸೂರು, ೧೯೭೮ , , , ೧೯೭೮ , , , ೧೯೭೨, , , , ೧೯೯೯. , , , ೧೯೭೧ , , , ೧೯೭೧ ಭಾಷೆಯ ಬಗೆಗೆ ನೀವೇನು ಬಲ್ಲಿರಿ?, ಬಾಶಾ ಪ್ರಕಾಶನ, ಪುಣ, ೧೯೭೦, ತಿದ್ದಿದ ಎರಡನೆ ಒಬ್ಬೆ: ಕನ್ನಡ ಸಂಗ, ಪುತ್ತೂರು, ೧೯೯೮; ತಿದ್ದಿದ ಮೂರನೆ ಒಬ್ಬೆ: ಬಾಶಾ ಪ್ರಕಾಶನ, ೨೦೦೨. ಕನ್ನಡ ಭಾಷೆಯ ಸಂಕ್ಷಿಪ್ತ ಚರಿತ್ರೆ, ಭಾಷಾ ಪ್ರಕಾಶನ, ಪುಣೆ, ೧೯೭೦; ತಿದ್ದಿದ ಒಬ್ಬೆ: ಕನ್ನಡ ಭಾಷೆಯ ಕಲ್ಪಿತ ಚರಿತ್ರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೫. , , , ೧೯೬೯ , , , ೧೯೬೮ , , , ೧೯೬೭. 'ಕನ್ನಡ ಭಾಷೆಯ ಕಲ್ಪಿತ ಚರಿತ್ರೆ', 'ಕನ್ನಡ ವ್ಯಾಕರಣ ಪರಂಪರೆ', 'ಕನ್ನಡ ಬರಹವನ್ನು ಸರಿಪಡಿಸೋಣ,' == ' ಪ್ರತಿಪಾದಿಸುವ, ತಾತ್ವಿಕತೆಯ ಹಿನ್ನೆಲೆ == ಭಾಷೆಕಲಿಕೆ, ರಚನೆ ಹಾಗೂ ಬಳಕೆಯಲ್ಲಿ ಸಿದ್ಧಾಂತಗಳಿವೆ. ಅವುಗಳೆಲ್ಲಾ ಏಕಮತೀಯವಲ್ಲ. ವಿರೋಧಗಳೂ ಇವೆ. ಭಾಷಾಶಾಸ್ತ್ರಜ್ಞ ಅವನು ನಂಬಿರುವ, ಸಿದ್ಧಾಂತಗಳಮೇಲೆ, ಮನೋಧರ್ಮವನ್ನೂ ಅದು ಅವಲಂಭಿಸಿರುತ್ತದೆ. ಕನ್ನಡಭಾಷೆಗೆ ವ್ಯಾಕರಣದ ಅಸಾಧ್ಯತೆಗಳು ಖಂಡಿತ ಇವೆ. ಕನ್ನಡಭಾಷೆಯ ನಿರೂಪಣೆಯ ಸ್ವರೂಪ, ವ್ಯಾಪ್ತಿ ಮತ್ತು ನಿಯೋಗಗಳಲ್ಲಿ ಅತ್ಯಂತ ಭಿನ್ನತೆ ಕಾಣಬಹುದು. ಭಾಷೆಯ ಚಾರಿತ್ರಿಕ ಮತ್ತು ಮತ್ತು ಸಮಕಾಲೀನ ಸ್ಥಿತಿ, ಕನ್ನಡದ ಉಪಭಾಷೆಗಳಿಂದ ಲಭ್ಯವಾಗುವ ಮಹಿತಿಗಳನ್ನು ಕಡೆಗಣಿಸಿದ್ದೇವೆ. ಕಾಲೇಜ್ ನಲ್ಲಿ ಓದಿದನಂತರ ವ್ಯಾಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಅತಿ ಕಡಿಮೆ. ನಮ್ಮ ಶಿಕ್ಷಣವ್ಯವಸ್ಥೆಯೂ ಅದನ್ನು ತಿಳಿಸಿಲ್ಲ. 'ನಾವು ಕಲಿಸುತ್ತಿರುವ ವ್ಯಾಕರಣ, ವ್ಯಾಕರಣ ಅಲ್ಲ' ಎಂಬ ಸಂಗತಿಯನ್ನು ಅವರು ಖಡಾಖಂಡಿತವಾಗಿ ಹೇಳುತ್ತಾರೆ. ಇದು ನಮ್ಮೆಲ್ಲರಿಗೆ ಚಿಂತನೆಗೆ ಎಡೆಮಾಡಿಕೊಡುವ ಸಂಗತಿಯಾಗಿದೆ. ಕನ್ನಡ, ದ್ರಾವಿಡಸಂಸ್ಕೃತಿಯ ಒಡಲಿನಲ್ಲಿ ರೂಪಿತವಾದರೂ, ತನ್ನದೇ ಆದ ಪ್ರತ್ಯೇಕ ವಿಶಿಷ್ಠ ಅಸ್ತಿತ್ವ, ಮತ್ತು ಲಕ್ಷಣಗಳ ಭಾಷೆಯೆನ್ನುವುದನ್ನು ತೋರಿಸಿಕೊಡುವ ಪ್ರಯತ್ನ. ಹಾಗೆನೋಡಿದರೆ, ಅವರ ಪಾಂಡಿತ್ಯವನ್ನು ನಾವು ಸಂಸ್ಕೃತ ಮತ್ತು ಇಂಡೋ ಅರ್ಯನ್ ಭಾಷೆ ಗಳಲ್ಲಿ ಕಾಣಬಹುದು. ಆದರೆ ಅವು ದ್ರಾವಿಡಚಿಂತನೆಗೆ ಪೂರಕವಾಗಿವೆ. ಭಾಷೆ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಸಾಧನಗಳಲ್ಲೊಂದು. ಅದರ ಗ್ರಹಿಕೆ, ಮತ್ತು ಬಳಕೆಯ ಕ್ರಮಗಳು ತಪ್ಪುದಾರಿ ತುಳಿದಾಗ, ಸಂಸ್ಕೃತಿ ವಿಶಿಷ್ಟ ಸಂಗತಿಗಳನ್ನು ಕಳೆದುಕೊಳ್ಳುವ ಅಪಾಯವಿದೆ. "ನಾನು ಶಿಕ್ಷಣತಜ್ಞನಲ್ಲ;ವೈಯ್ಯಾಕರಣ ಮಾತ್ರ" ಎಂದು ವಿನಯವಾಗಿ ಹೇಳುವ ಅವರು, ಭಾಷಾಶಿಕ್ಷಣಕ್ಕೆ ಹೊಸ ಆಯಾಮಗಳನ್ನು, ನೀಡುವ ಸಾಮರ್ಥ್ಯವಿರುವ ವಿದ್ವಾಂಸರಲ್ಲಿ, ಪ್ರಮುಖರು. == ಪ್ರಶಸ್ತಿ, ಗೌರವಗಳು == ೨೦೧೦ನೇ ಸಾಲಿನಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ 'ನಾಡೋಜ' ಗೌರವ ೨೦೧೨-೧೩ರಲ್ಲಿ ಪಂಪ ಪ್ರಶಸ್ತಿ == ನೋಡಿ == ಡಿ.ಎನ್.ಶಂಕರ ಬಟ್ - -(ಈ ಪುಟದಲ್ಲಿ ಲೇಖನದ- ಬರಹ ಶಂಕರ ಭಟ್ಟರು ಮುಂದಿಟ್ಟಿರುವ "ಹೊಸಬರಹ"ದಲ್ಲಿದೆ) == ಉಲ್ಲೇಖಗಳು == == ಹೊರಕೊಂಡಿಗಳು == ಡಿ.ಎನ್.ಶಂಕರ ಭಟ್ಟರ ಮಿಂದಾಣ : , , , | ೨೭, ೨೦೧೫ ನವನುಡಿಯ ಕನಸುಗಾರ 2016-03-19 ವೇಬ್ಯಾಕ್ ಮೆಷಿನ್ ನಲ್ಲಿ., ವಿಜಯ ನೆಕ್ಸ್ಟ್